ರಾಜಕೀಯ

Mandya: ಚುನಾವಣೆಗೂ ಮುನ್ನವೆ ಗೆದ್ದು ಬೀಗಿದ ಕಾಂಗ್ರೆಸ್​; ‘ಕೈ’ ವಶವಾದ ಡಿಸಿಸಿ ಬ್ಯಾಂಕ್​ ಚುಕ್ಕಾಣಿ!

ಚುನಾವಣೆಗೂ (Election) ಮುನ್ನವೇ ಡಿಸಿಸಿ ಬ್ಯಾಂಕ್​ (DCC Bank Election) ನಿರ್ದೇಶಕರ ಆಯ್ಕೆಯಲ್ಲಿ ಕಾಂಗ್ರೆಸ್ ಗೆದ್ದು ಬೀಗಿದೆ. ​ಮಂಡ್ಯ ಜಿಲ್ಲೆಯ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ (Congress) ದೊಡ್ಡ ಗೆಲುವು ಸಾಧಿಸಿದೆ. ಮಂಡ್ಯ ಡಿಸಿಸಿ ಬ್ಯಾಂಕ್‌ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್‌ ಸಜ್ಜಾಗಿದೆ. ಒಟ್ಟು 12 ನಿರ್ದೇಶಕ ಸ್ಥಾನಗಳಲ್ಲಿ 8 ಸ್ಥಾನಗಳನ್ನು ಅವಿರೋಧವಾಗಿ ಆಯ್ಕೆಯಾಗಿ ಗೆದ್ದಿದ್ದಾರೆ. ಉಳಿದ 4 ಸ್ಥಾನಗಳಿಗೆ ನವೆಂಬರ್ 2 ರಂದು ಚುನಾವಣೆ ನಡೆಯಲಿದೆ.

ಈ ಬ್ಯಾಂಕ್ ಕೃಷಿ ಪತ್ತಿ ಸಹಕಾರ ಸಂಘಗಳಿಗೆ ಸಂಬಂಧಿಸಿದ್ದು, ಜಿಲ್ಲೆಯ ರೈತರಿಗೆ ಮುಖ್ಯವಾಗಿದೆ. ಆದರೆ ಚುನಾವಣೆಗೂ ಮುನ್ನವೇ ಕಾಂಗ್ರೆಸ್​ ನಾಯಕರು ಡಿಸಿಸಿ ಬ್ಯಾಂಕ್​ ಚುಕ್ಕಾಣಿ ಹಿಡಿದಿದ್ದಾರೆ. ಕಾಂಗ್ರೆಸ್ ಬೆಂಬಲಿತರ ಅವಿರೋಧ ಆಯ್ಕೆಯಿಂದ ಪಕ್ಷದ ನಾಯಕರು ಸಂತೋಷಗೊಂಡಿದ್ದಾರೆ.

ಡಿಸಿಸಿ ಬ್ಯಾಂಕ್​ ಚುನಾವಣೆಯಲ್ಲಿ ಗೆದ್ದು ಬೀಗಿದ ಕಾಂಗ್ರೆಸ್​​!

ಚುನಾವಣೆಯಲ್ಲಿ ಮಂಡ್ಯ, ಪಾಂಡವಪುರ, ಕೆ.ಆರ್.ಪೇಟೆ ತಾಲೂಕುಗಳ ಕೃಷಿ ಪತ್ತಿ ಸಹಕಾರ ಸಂಘಗಳ ಕೇತ್ರಗಳಿಗೆ ನಿರ್ದೇಶಕರ ಆಯ್ಕೆಗೆ ಚುನಾವಣೆ ನಡೆಯಲಿದೆ. ಈಗಾಗಲೇ ಮಂಡ್ಯದಲ್ಲಿ 8 ಜನರು ಅವಿರೋಧವಾಗಿ ಗೆದ್ದಿದ್ದಾರೆ. ಅವರಲ್ಲಿ ಶಾಸಕ ಪಿ.ಎಂ. ನರೇಂದ್ರಸ್ವಾಮಿ, ಸಚಿವ ಚಲುವರಾಯಸ್ವಾಮಿ ಅವರ ಪುತ್ರ ಸಚಿನ್, ಪಿ. ಸಂದರ್ಶ, ಬಿ. ಗಿರೀಶ್, ಕೆ.ವಿ. ದಿನೇಶ್, ಹೆಚ್. ಅಶೋಕ್, ಎ. ವಿಜೇಂದ್ರಮೂರ್ತಿ, ಕೆ.ಸಿ. ಜೋಗಿಗೌಡ ಅವರ ಸೇರಿದ್ದಾರೆ. ಇವರು ಕಾಂಗ್ರೆಸ್ ಬೆಂಬಲಿತರಾಗಿದ್ದು, ಪಕ್ಷದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

Leave a Reply

Your email address will not be published. Required fields are marked *

Back to top button