ಆರೋಗ್ಯಇತ್ತೀಚಿನ ಸುದ್ದಿಉದ್ಯೋಗಕ್ರೀಡೆಕ್ರೈಂದೇಶರಾಜ್ಯರಾಷ್ಟ್ರಿಯವಿದೇಶಸಿನಿಮಾಸುದ್ದಿ

Hindu Temple: ಪುಣ್ಯಕ್ಷೇತ್ರಗಳ ಪುಣ್ಯ ಸ್ನಾನಕ್ಕಿನ್ನು ಸ್ಟ್ರಿಕ್ಟ್ ರೂಲ್ಸ್; ನದಿ ದಡದಲ್ಲಿ ಶಾಂಪೂ, ಸೋಪ್ ಮಾರಾಟ ಬ್ಯಾನ್!

ಪುಣ್ಯ ಕ್ಷೇತ್ರಗಳಲ್ಲಿ (Punya Kshetra), ವಿಶೇಷವಾಗಿ ಪವಿತ್ರ ನದಿಗಳಲ್ಲಿ ಹೋಗಿ ಸ್ನಾನ ಮಾಡಿದ್ರೆ ಪಾಪಕರ್ಮಗಳು ದೂರವಾಗುತ್ತೆ ಅನ್ನೋದು ನಂಬಿಕೆ. ಅದರಂತೆ ಬಹುತೇಕರು ಇಂತಹ ಪವಿತ್ರ ನದಿಗಳಲ್ಲಿ ಹೋಗಿ ಸ್ನಾನ ಮಾಡುತ್ತಾರೆ. ಮೊದಲೆಲ್ಲಾ ಬರೀ ಮುಳುಗಿ ಬರುತ್ತಿದ್ದ ಜನ, ಇತ್ತೀಚೆಗೆ ಬಾತ್‌ರೂಮ್‌ನಲ್ಲಿ ಸ್ನಾನ ಮಾಡಿದಂತೆ ಶಾಂಪೂ, ಸೋಪು (Shampoo, Soap) ಹಾಕಿಕೊಂಡು ಸ್ನಾನ ಮಾಡಲು ಶುರು ಮಾಡಿದ್ದಾರೆ. ಇತ್ತೀಚೆಗಂತೂ ಇದು ತುಂಬಾನೇ ಹೆಚ್ಚಳವಾಗಿದೆ. ಇಂತಹ ರಾಸಾಯನಯುಕ್ತ ಉತ್ಪನ್ನಗಳನ್ನು ಬಳಸುತ್ತಿರುವುದರಿಂದ ನದಿ ನೀರುಗಳೆಲ್ಲಾ ಕಲುಷಿತಗೊಳ್ಳುತ್ತಿದೆ. ಇದೀಗ ಇವುಗಳನ್ನೆಲ್ಲಾ ನಿಯಂತ್ರಿಸುವ ದೃಷ್ಟಿಯಿಂದ ಅರಣ್ಯ ಇಲಾಖೆ ಮಹತ್ವದ ಆದೇಶವೊಂದನ್ನು ಪ್ರಕಟಿಸಿದೆ.

ಶಾಂಪೂ, ಸೋಪು ಮಾರಾಟ ನಿಷೇಧ!

ಪುಣ್ಯ ಕ್ಷೇತ್ರಗಳಲ್ಲಿ, ವಿಶೇಷವಾಗಿ ಪವಿತ್ರ ನದಿಗಳ ತೀರದಲ್ಲಿ ಶಾಂಪು, ಸೋಪುಗಳ ಮಾರಾಟವನ್ನು ನಿಷೇಧಿಸುವ ಕುರಿತು ಸರ್ಕಾರ ಮತ್ತು ಸಂಬಂಧಪಟ್ಟ ಸಂಸ್ಥೆಗಳು ಇನ್ಮುಂದೆ ಮಾರಾಟ ಮಾಡುವಂತಿಲ್ಲ ಎಂದು ಆದೇಶ ಹೊರಡಿಸಿದೆ. ಪರಿಸರ ಸಂರಕ್ಷಣೆ ಮತ್ತು ನದಿಗಳ ಸ್ವಚ್ಛತೆಯನ್ನು ಕಾಪಾಡುವುದೇ ಇದರ ಮೂಲ ಉದ್ದೇಶವಾಗಿದ್ದು, ಈ ಹಿನ್ನೆಲೆ ಅರಣ್ಯ ಮತ್ತು ಪರಿಸರ ಇಲಾಖೆ (Karnataka Forest Department) ಇನ್ಮುಂದೆ ಪುಣ್ಯಕ್ಷೇತ್ರಗಳ ನದಿ ತೀರದಲ್ಲಿ ಶಾಂಪೂ, ಸೋಪುಗಳನ್ನು ಮಾರಾಟ ಮಾಡುವಂತಿಲ್ಲ ಎಂದು ಹೇಳಿದೆ.

ಪುಣ್ಯ ಕ್ಷೇತ್ರಗಳಾದ ಕಾಶಿ, ಗಯಾ, ತಿರುಪತಿ, ಶ್ರೀರಂಗಪಟ್ಟಣ, ಶಿರಡಿ, ಧರ್ಮಸ್ಥಳ ಹೀಗೆ ಮೊದಲಾದ ಸ್ಥಳಗಳಲ್ಲಿ ಲಕ್ಷಾಂತರ ಭಕ್ತರು ದೇವರ ದರ್ಶನಕ್ಕಾಗಿ ಬರುತ್ತಾರೆ. ಈ ಸ್ಥಳಗಳಲ್ಲಿ ಪವಿತ್ರ ಸ್ನಾನ ಮಾಡುವ ಸಂಪ್ರದಾಯವಿದೆ. ಆದರೆ, ಸ್ನಾನದ ಸಮಯದಲ್ಲಿ ಶಾಂಪು ಮತ್ತು ಸೋಪುಗಳನ್ನು ಬಳಸುವುದರಿಂದ ನದಿಯ ನೀರು ಮಾಲಿನ್ಯಗೊಳ್ಳುತ್ತದೆ. ಇದರಲ್ಲಿ ಇರುವ ರಾಸಾಯನಿಕ ಪದಾರ್ಥಗಳು ನೀರಿನ ಗುಣಮಟ್ಟವನ್ನು ಕೆಡಿಸುತ್ತವೆ ಮತ್ತು ಜಲಚರಗಳಿಗೆ ಹಾನಿ ಮಾಡುತ್ತವೆ. ಇದರಿಂದಾಗಿ ಪರಿಸರದ ಸ್ವಚ್ಛತೆ ಕೂಡಾ ಹಾಳಾಗುತ್ತಿದೆ.

ಈ ಸಮಸ್ಯೆಯನ್ನು ತಡೆಗಟ್ಟಲು, ಪುಣ್ಯ ಕ್ಷೇತ್ರಗಳ ಸುತ್ತಮುತ್ತ ಶಾಂಪು, ಸೋಪುಗಳ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸುವ ನಿರ್ಧಾರವನ್ನು ಇದೀಗ ಅರಣ್ಯ ಇಲಾಖೆ ಜಾರಿಗೆ ತಂದಿದೆ.

ಬದಲಿಗೆ, ಪರಿಸರ ಸ್ನೇಹಿ ಉತ್ಪನ್ನಗಳ ಬಳಕೆಯನ್ನು ಪ್ರೋತ್ಸಾಹಿಸಲಾಗುತ್ತಿದೆ. ಉದಾಹರಣೆಗೆ, ಸಾಂಪ್ರದಾಯಿಕವಾಗಿ ಬಳಸುವ ಮಣ್ಣು, ಹರಳಿನ ಪುಡಿ ಅಥವಾ ನೈಸರ್ಗಿಕ ಸಸ್ಯಗಳಿಂದ ಮಾಡಿದ ಸೋಪುಗಳನ್ನು ಬಳಸುವಂತೆ ಹೇಳಲಾಗಿದೆ.

Related Articles

Leave a Reply

Your email address will not be published. Required fields are marked *

Back to top button