Rashmik Mandanna: ರಶ್ಮಿಕಾ ವಿರುದ್ಧ ಕೈ ಶಾಸಕ ಮತ್ತೆ ಗರಂ, ಭದ್ರತೆ ಕೊಡಿ ಎಂದಿದ್ದಕ್ಕೆ ರವಿ ಗಣಿಗ ಹೇಳಿದ್ದೇನು?

ನಾನು ಹೈದ್ರಾಬಾದ್ ಹುಡುಗಿ ಎಂದು ನಟಿ ರಶ್ಮಿಕಾ ಮಂದಣ್ಣ (Actor Rashmika Mandanna) ಸ್ಟೇಟ್ಮೆಂಟ್ ಕೊಟ್ಟ ಬಳಿಕ ರಾಜ್ಯದಲ್ಲಿ ರಶ್ಮಿಕಾ ಪರ ಹಾಗೂ ವಿರೋಧದ ಚರ್ಚೆಗಳು ಶುರುವಾಗಿದೆ. ಟ್ರೋಲ್ ಪೇಜ್ಗಳು (Troll Pages) ನಟಿ ರಶ್ಮಿಕಾ ಮಂದಣ್ಣ ಅವರ ಕುರಿತು ನಾನಾ ಪೋಸ್ಟ್ ಹಾಕ್ತಿದ್ದಾರೆ. ಜೊತೆಗೆ ಕೈ ಶಾಸಕ ರವಿ ಗಣಿಗ (MLA Ravi Ganiga) ಕೂಡ ನಟಿ ರಶ್ಮಿಕಾ ವಿರುದ್ಧ ವಾಗ್ದಾಳಿ ನಡೆಸಿದ್ರು. ಇದರ ನಡುವೆ ಕೊಡವ ಸಮುದಾಯದವರು ನಮ್ಮ ಕೂರ್ಗಿನ ಹುಡುಗಿ ರಶ್ಮಿಕಾ ಮಂದಣ್ಣ ಅವರಿಗೆ ಜೀವ ಬೆದರಿಕೆ ಇದೆ ಅವರಿಗೆ ರಕ್ಷಣೆ ನೀಡಿ ಅಂತ ಗೃಹ ಸಚಿವರಿಗೆ ಪತ್ರ ಬರೆದಿದ್ರು. ಈ ವಿಚಾರಕ್ಕೆ ಮತ್ತೆ ಕಾಂಗ್ರೆಸ್ ಶಾಕರ ರವಿ ಗಣಿಗ ಕಿಡಿಕಾರಿದ್ದಾರೆ.
‘ರಾಜ್ಯ ಒಡೆಯುವ ಹೇಳಿಕೆ ಕೊಟ್ಟವರು ಅವ್ರು’
ರಶ್ಮಿಕಾ ಮಂದಣ್ಣಗೆ ಜೀವ ಬೆದರಿಕೆ ಇದೆ ಎಂದು ಗೃಹ ಸಚಿವರಿಗೆ ಪತ್ರ ಬರೆದ ವಿಚಾರಕ್ಕೆ ಸಂಬಂಧಿಪಟ್ಟಂತೆ ವಿಧಾನಸೌಧದಲ್ಲಿ ಕಾಂಗ್ರೆಸ್ ಶಾಸಕ ರವಿ ಕುಮಾರ್ ಗಣಿಗ ಪ್ರತಿಕ್ರಿಯಿಸಿದ್ರು. ಯಾರಾದ್ರೂ ಜವಾಬ್ದಾರಿಯುತ ವ್ಯಕ್ತಿ ಮಾತಾಡಿದ್ದರೆ ಬೆಲೆ ಕೊಡಬಹುದು. ಆದ್ರೆ ನಾಚಪ್ಪ ಅವರು ರಾಜ್ಯ ಒಡೆಯುವ ಹೇಳಿಕೆ ಕೊಟ್ಟ ವ್ಯಕ್ತಿಯಾಗಿದ್ದಾರೆ. ಅವರ ಪತ್ರಕ್ಕೆ ಅಷ್ಟು ಬೆಲೆ ಕೊಡುವುದು ಬೇಡ ಎಂದಿದ್ದಾರೆ.
ಪ್ರಚಾರಕ್ಕೆ ಅಂತ ಪತ್ರ ಬರೆದಿದ್ದಾರೆ
ನಟಿಯ ಬಗ್ಗೆ ನಾನು ನೀಡಿದ ಹೇಳಿಕೆಗೆ ಇವತ್ತು ಬದ್ಧನಿದ್ದೇನೆ ಎಂದ ರವಿ ಗಣಿಗ ಅವರು, ರಶ್ಮಿಕಾ ಮಂದಣ್ಣ ಅವರಿಗೆ ಕಳೆದ ಚಲನಚಿತ್ರೋತ್ಸವಕ್ಕೆ ಆಹ್ವಾನ ನೀಡಿದ್ದೇವು. ಅವರು ಬಂದಿಲ್ಲ ಅನ್ನೋ ಕಾರಣಕ್ಕೆ ನಾವು ಅಸಮಾಧಾನ ವ್ಯಕ್ತಪಡಿಸಿದ್ದೇವೆ. ಕನ್ನಡ ನೆಲ, ಜಲ ನಾಡು ವಿಚಾರಕ್ಕೆ ಎಲ್ಲರೂ ಒಂದಾಗಿರಬೇಕು ಅನ್ನೋದು ನಮ್ಮ ಭಾವನೆ ಆಗಿದೆ. ಪ್ರಚಾರಕ್ಕೆ ಅಂತ ಪತ್ರ ಬರೆದವರಿಗೆ ಬೆಲೆ ಕೊಡುವುದು ಬೇಡ ಎಂದು ರವಿ ಗಣಿಗ ಕಿಡಿಕಾರಿದ್ರು.