ರಾಜ್ಯ

RSS: ಸರ್ಕಾರಕ್ಕೆ ಭಾರೀ ಹಿನ್ನಡೆ; ಆರ್​ಎಸ್​ಎಸ್​ ವಿಚಾರದಲ್ಲಿ ಧಾರವಾಡ ಪೀಠ ಪ್ರಮುಖ ನಿರ್ಧಾರ!

ಸರ್ಕಾರಿ ಆವರಣದಲ್ಲಿ (Public Places) ಖಾಸಗಿ ಸಂಘಟನೆಗಳು ಕಾರ್ಯಕ್ರಮ ನಡೆಸಬೇಕು ಎಂದರೆ ಅನುಮತಿ ಪಡೆಯಬೇಕೆಂಬ ಸರ್ಕಾರದ ನಿರ್ಧಾರ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಸರ್ಕಾರಿ ಆಸ್ತಿಗಳು, ಪಾರ್ಕ್‌ಗಳು, ಶಾಲೆಗಳು, ಕಾಲೇಜುಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಖಾಸಗಿ ಸಂಘಟನೆಗಳು ಅಥವಾ ಸಮೂಹಗಳು ಚಟುವಟಿಕೆಗಳನ್ನು ನಡೆಸಲು ಮುಂಚಿತವಾ ಅನುಮತಿ ಪಡೆಯಬೇಕು ಎಂಬ ಆದೇಶ ಪ್ರಶ್ನಿಸಿ ಕೋರ್ಟ್​ ಮೆಟ್ಟಿಲೇರಲಾಗಿದ್ದು, ಇದೀಗ ಮಹತ್ವದ ನಿರ್ಧಾರ ಹೊರಡಿಸಿದೆ.

ಖಾಸಗಿ ಸಂಘಟನೆಗಳುಲ, ಸಂಸ್ಥೆಗಳು ಸರ್ಕಾರಿ ಸ್ಥಳಗಳಲ್ಲಿ ಕಾರ್ಯಕ್ರಮಕ್ಕೆ ಅನುಮತಿ ಪಡೆಯಬೇಕು ಎಂಬ ಸರ್ಕಾರದ ಆದೇಶ ಆರ್‌ಎಸ್‌ಎಸ್ (ರಾಷ್ಟ್ರೀಯ ಸ್ವಯಂಸೇವಕ ಸಂಘ) ಚಟುವಟಿಕೆಗಳನ್ನು ಗುರಿಯಾಗಿಸುವಂತೆ ಇತ್ತು. ಹೀಗಾಗಿ ಈ ಸಬಂಧ ಕೋರ್ಟ್​ ಮೆಟ್ಟಿಲೇರಿದ್ದರು, ಇದೀಗ ಧಾರವಾಡ ಪೀಠ ಮಹತ್ವದ ಸೂಚನೆ ಹೊರಡಿಸಿದೆ.
ಸರ್ಕಾರಕ್ಕೆ ಭಾರೀ ಹಿನ್ನಡೆಯಾದ ಕೋರ್ಟ್​ ನಿರ್ಧಾರ!

ಸರ್ಕಾರದ ಈ ಸರ್ಕಾರಿ ಜಾಗಗಳಲ್ಲಿ ಖಾಸಗಿ ಸಂಘಟನೆಗಳು ಯಾವುದೇ ಕಾರ್ಯಕ್ರಮಗಳಿಗೆ ಅನುಮತಿ ಪಡೆಯಬೇಕು ಎಂಬ ಆದೇಶದ ವಿರುದ್ಧ ಧಾರವಾಡ ಕೋರ್ಟ್​ನಲ್ಲಿ ಕೇಸ್​ ಸಲ್ಲಿಕೆಯಾಗಿದ್ದು, ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಸರ್ಕಾರದ ಆದೇಶಕ್ಕೆ ಧಾರವಾಡ ಹೈಕೋರ್ಟ್ ಪೀಠ ತಡೆಯಾಜ್ಞೆ ನೀಡಿದ್ದು, ಇದು ಸರ್ಕಾರಕ್ಕೆ ಭಾರೀ ಹಿನ್ನಡೆಯಾಗಿದೆ.

Leave a Reply

Your email address will not be published. Required fields are marked *

Back to top button