Montha Cyclone Effect: ಇನ್ನೂ 3 ದಿನ ರಾಜ್ಯದಲ್ಲಿ ಭಾರೀ ಮಳೆ, ಹವಾಮಾನ ಇಲಾಖೆ ಎಚ್ಚರಿಕೆ!

ಮೋಂಟಾ ಚಂಡಮಾರುತದಿಂದ ಅಕ್ಟೋಬರ್ 27-30ರೊಳಗೆ ಕರ್ನಾಟಕ ಸೇರಿದಂತೆ ಪೂರ್ವ ಕರಾವಳಿಯ ಹಲವು ಪ್ರದೇಶಗಳಲ್ಲಿ ಐಎಂಡಿ ಭಾರೀ ಮಳೆಯ ಮುನ್ಸೂಚನೆ ನೀಡಿದೆ.
ಮೋಂಟಾ ಚಂಡಮಾರುತದ ಕಾರಣದಿಂದಾಗಿ ಮುಂದಿನ ಮೂರು ದಿನಗಳವರೆಗೆ ಕರ್ನಾಟಕದಾದ್ಯಂತ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಬೆಂಗಳೂರಿನ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.(ಸಾಂದರ್ಭಿಕ ಚಿತ್ರ)
“ನಿರೀಕ್ಷಿತ ಚಂಡಮಾರುತದ ಕಾರಣದಿಂದಾಗಿ ಅಕ್ಟೋಬರ್ 27 ರಿಂದ 30 ರವರೆಗೆ ಕರ್ನಾಟಕದಾದ್ಯಂತ ವ್ಯಾಪಕ ಮಳೆಯಾಗುವ ನಿರೀಕ್ಷೆಯಿದೆ” ಎಂದು ಬೆಂಗಳೂರಿನ ಐಎಂಡಿ ನಿರ್ದೇಶಕರು ಹೇಳಿದ್ದಾರೆ.(ಸಾಂದರ್ಭಿಕ ಚಿತ್ರ)
ಬಂಗಾಳಕೊಲ್ಲಿಯಲ್ಲಿ ರೂಪುಗೊಳ್ಳುತ್ತಿರುವ ವಾಯುಭಾರ ಕುಸಿತವು ಮೋಂಟಾ ಚಂಡಮಾರುತವಾಗಿ ತೀವ್ರಗೊಂಡಿದೆ. ಈ ಚಂಡಮಾರುತವು ತೀವ್ರಗೊಂಡು ಭಾರತದ ಪೂರ್ವ ಕರಾವಳಿಯನ್ನು ಅಪ್ಪಳಿಸಿದೆ. ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆ ಅನ್ವಯ, ಒಡಿಶಾ, ತೆಲಂಗಾಣ, ಆಂಧ್ರ ಪ್ರದೇಶ, ಕರ್ನಾಟಕ, ತಮಿಳುನಾಡು ಸೇರಿದಂತೆ ಹಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗಲಿದೆ. (ಸಾಂದರ್ಭಿಕ ಚಿತ್ರ)
ಥೈಲ್ಯಾಂಡ್ ಈ ಚಂಡಮಾರುತಕ್ಕೆ ಮೋಂಟಾ ಎಂದು ಹೆಸರಿಟ್ಟಿದ್ದು, ಥಾಯ್ ಭಾಷೆಯಲ್ಲಿ ‘ಪರಿಮಳಯುಕ್ತ ಅಥವಾ ಸುಂದರವಾದ ಹೂವು’ ಎಂಬರ್ಥವನ್ನು ನೀಡುತ್ತದೆ. ಈ ಚಂಡಮಾರುತವೂ ಗಂಟೆಗೆ 90 ರಿಂದ 110 ಕಿ.ಮೀ ವೇಗವನ್ನು ತಲುಪಬಹುದು ಎಂದು ಅಂದಾಜು ಮಾಡಲಾಗಿದ್ದು, ಭಾರತದ ಪೂರ್ವ ಕರಾವಳಿಯ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯನ್ನು ಸುರಿಸಲಿದೆ.(ಸಾಂದರ್ಭಿಕ ಚಿತ್ರ)
