ರಾಜ್ಯ

Bengaluru: ಬೆಂಗಳೂರಲ್ಲಿ ಯುವಕನ ಬರ್ಬರ ಹ*, ಕುಡಿದು ಗಲಾಟೆ ಮಾಡಿದವ ಗಂಟೆಗಳಲ್ಲೇ ಬೀದಿ ಹೆಣವಾದ

ಬೆಂಗಳೂರು (ಅ.28): ರಾಜ್ಯ ರಾಜಧಾನಿಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿದೆ. ಬೆಂಗಳೂರಿನ (Bengaluru) ಉಲ್ಲಾಳ ಉಪನಗರದಲ್ಲಿ ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ಯುವಕನನ್ನು ಬರ್ಬರವಾಗಿ ಕೊಲೆಗೈಯಲಾಗಿದೆ (Murder) ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಜ್ಞಾನಭಾರತಿ ಪೊಲೀಸರು (Gnanabharati Police) ಭೇಟಿ, ಪರಿಶೀಲನೆ ನಡೆಸಿದ್ರು. ಸಂಬಂಧಿಕನೇ ಹೊಡೆದು ಕೊಂದಿದ್ದಾನೆ ಎನ್ನಲಾಗ್ತಿದೆ. ಕಾರಣ ಏನು?

ಯುವಕನ ಬರ್ಬರ ಹತ್ಯೆಗೆ ಕಾರಣ ಏನು?

ಬೆಂಗಳೂರಲ್ಲಿ ನಿತ್ಯ ಕೊಲೆ, ಸುಲಿಗೆ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇರುತ್ತೆ. ಇಂದು ಉಳ್ಳಾಲ ಉಪನಗರದ ಬಳಿ ಹೆಣವಾಗಿ ಬಿದ್ದಿದ್ದ ಯುವಕನ ಗುರುತನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. 36 ವರ್ಷದ ಅವಿನಾಶ್​ ಕೊಲೆಯಾದ ಯುವಕ, ಈತನನ್ನು ಸಂಬಂಧಿಕನೇ ಕೊಂದಿದ್ದಾನೆ ಎಂದು ತಿಳಿದು ಬಂದಿದೆ.

ಕುಡಿದು ಗಲಾಟೆ, ತಾಯಿಗೆ ನಿಂದನೆ

ಸಂಬಂಧಿಕನಾದ ಕಾರ್ತಿಕ್​ ಮನೆಗೆ ಹೋಗಿದ್ದ ಅವಿನಾಶ್​ ಕುಡಿದು ಗಲಾಟೆ ಮಾಡಿದ್ದನಂತೆ. ಕಾರ್ತಿಕ್ ತಾಯಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದ ಎನ್ನಲಾಗ್ತಿದೆ. ತಾಯಿಗೆ ಕೆಟ್ಟ, ಕೆಟ್ಟ ಮಾತುಗಳಿಂದ ಬೈಯ್ದ ಎನ್ನುವ ಕಾರಣಕ್ಕೆ ಕಾರ್ತಿಕ್​ ಸಿಟ್ಟಿನಲ್ಲಿ ಸ್ಕೆಚ್​ ಹಾಕಿ ಅವಿವಾಶ್​​ ನನ್ನು ಕೊಲೆಗೈದಿದ್ದಾನೆ ಎನ್ನಲಾಗ್ತಿದೆ.

Leave a Reply

Your email address will not be published. Required fields are marked *

Back to top button