ದೇಶ ವಿದೇಶ

ಪಾಟ್ಬಾ: ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ನವೆಂಬರ್ 6 ರಂದು ನಡೆಯಲಿದೆ. ಆದರೆ, ಈ ಮತದಾನಕ್ಕೂ ಮುಂಚೆಯೇ, ಜನ್ ಸೂರಜ್ ಪಕ್ಷದ ಮುಖ್ಯಸ್ಥ ಮತ್ತು ಚುನಾವಣಾ ತಂತ್ರಜ್ಞ, ರಾಜಕಾರಣಿ ಪ್ರಶಾಂತ್ ಕಿಶೋರ್ ಗಂಭೀರ ಸಮಸ್ಯೆಯಲ್ಲಿದ್ದಾರೆ.

ಕಿಶೋರ್ ಅವರ ಹೆಸರನ್ನು ಪಶ್ಚಿಮ ಬಂಗಾಳ ಮತ್ತು ಬಿಹಾರ ಎರಡು ರಾಜ್ಯಗಳ ಮತದಾರರ ಪಟ್ಟಿಗಳಲ್ಲಿ ಇರುವುದನ್ನು ಬಹಿರಂಗಪಡಿಸಿದೆ. ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಯ ಪ್ರಕಾರ, ಪ್ರಶಾಂತ್ ಕಿಶೋರ್ ಅವರ ಹೆಸರು ಮತದಾರರ ಪಟ್ಟಿಯಲ್ಲಿ ಕೋಲ್ಕತ್ತಾದ 121 ಕಾಲಿಘಾಟ್ ರಸ್ತೆಯಲ್ಲಿ ನೋಂದಾಯಿಸಲ್ಪಟ್ಟಿದೆ. ಇದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪ್ರಧಾನ ಕಚೇರಿ ಇರುವ ವಿಳಾಸವಾಗಿದೆ. ಈ ಪ್ರದೇಶವು ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕ್ಷೇತ್ರವಾದ ಭವಾನಿಪುರದಲ್ಲಿದೆ.

2021 ರ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಪ್ರಶಾಂತ್ ಕಿಶೋರ್ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪರ ಚುನಾವಣಾ ತಂತ್ರಜ್ಞರಾಗಿ ಕೆಲಸ ಮಾಡಿದರು. ಅಲ್ಲಿ ಅವರ ಮತಗಟ್ಟೆಯನ್ನು ಬಿ. ರಾಣಿಶಂಕರಿ ಲೇನ್ ನ ಸೇಂಟ್ ಹೆಲೆನ್ಸ್ ಶಾಲೆ ಎಂದು ಪಟ್ಟಿ ಮಾಡಲಾಗಿದೆ.

ಬಿಹಾರದ ರೋಹ್ತಾಸ್ ಜಿಲ್ಲೆಯ ಕೋನಾರ್ ಗ್ರಾಮದ ಮತದಾರರ ಪಟ್ಟಿಯಲ್ಲಿ ಕೂಡ ಅವರ ಹೆಸರು ಕೂಡ ಇದೆ. ಇದು ಪ್ರಶಾಂತ್ ಕಿಶೋರ್ ಅವರ ಪೂರ್ವಜರ ಗ್ರಾಮವಾಗಿದ್ದು, ಇದು ಸಸಾರಂ ಸಂಸದೀಯ ಕ್ಷೇತ್ರದ ಕಾರ್ಗಹರ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಇಲ್ಲಿರುವ ಅವರ ಮತಗಟ್ಟೆ ಕೋನಾರ್‌ನ ಮಧ್ಯ ವಿದ್ಯಾಲಯ.

Leave a Reply

Your email address will not be published. Required fields are marked *

Back to top button