ಸಿನಿಮಾ
Maykara: ಎಂಥಾ ಶಾಕ್ ಕೊಟ್ಬಿಟ್ರಿ ಶೆಟ್ರೇ..! ಕುಂದರ್ರೂ ಅಲ್ಲ, ಎನ್ ಟಿ ಆರೂ ಅಲ್ಲ, ಈ ʼಮಾಯʼ ಮಾಡಿದ್ದು ನಮ್ ಕುಂದಾಪ್ರದ ಕಂದನೇ!

ಬೆಂಗಳೂರು: ಕಾಂತಾರ (Kantara) ಸಾವಿರ ಕೋಟಿ ಗಳಿಸುವ ಹೊಸ್ತಿಲಲ್ಲಿ ಧಾಪುಗಾಲಿಡುತ್ತಿದೆ. ಈ ವೇಳೆಯಲ್ಲಿ ಕಾಂತಾರದ ಕಾರ್ಯಕಾರಣ ಶಕ್ತಿಯಾದ (Power) ರಿಷಬ್ ಹೊಸ ವಿಷಯವೊಂದನ್ನು ಹಂಚಿಕೊಂಡಿದ್ದಾರೆ.
ಟಾಪ್ ಎಂಡ್ ಟಾಪ್ ಪಾತ್ರ ಯಾವ್ದಪ್ಪಾ ಅಂದ್ರೆ ಅದು ಮಾಯ್ಕಾರ!
ಕಾಂತಾರ ನೋಡಿದ ಎಲ್ಲರಿಗೂ ಬಹುವಾಗಿ ಕಾಡಿದ ಪಾತ್ರಗಳಲ್ಲಿ ಒಂದು ಮಾಯ್ಕಾರನ ಪಾತ್ರ. ಕೆಲವೇ ಕೆಲವು ನಿಮಿಷಗಳಷ್ಟು ಸ್ಕ್ರೀನ್ ಸ್ಪೇಸ್ ನ ಹೊರತಾಗಿಯೂ ಅದ್ಭುತ ಪ್ರಭಾವ ಸೃಷ್ಟಿಸಿದ ಈ ಪಾತ್ರ ಪೋಷಣೆ ಮಾಡಿದ್ಯಾರು? ಎಂಬ ಹುಳ ಅಕ್ಟೋಬರ್ 2 ರಿಂದ ಎಲ್ಲರೂ ತಲೆಯಲ್ಲಿ ಬಿಟ್ಟುಕೊಂಡಿದ್ದರು. ಅದಾಗ್ಯೂ ಸೋಶಿಯಲ್ ಮೀಡಿಯಾದಲ್ಲಿ ಪ್ರಭಾಕರ್ ಕುಂದರ್ ಹೆಸರೂ ಹಾಗೆಯೇ ಜೂನಿಯರ್ ಎನ್ ಟಿ ಆರ್ ಅಂತೇ ಎಂಬ ವದಂತಿ ಹಬ್ಬಿತ್ತು.

