Shiva Rajkumar: ಇದಕ್ಕೆ ಅಲ್ವಾ ಎಲ್ಲರಿಗೂ ಶಿವಣ್ಣ ಇಷ್ಟವಾಗೋದು! ಸ್ನೇಹಿತರಿಗಾಗಿ ಏನ್ ಮಾಡಿದ್ದಾರೆ ನೋಡಿ…

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Shiva Rajkumar) ತುಂಬಾನೆ ಸಿಂಪಲ್ ಆಗಿದ್ದಾರೆ. ರಾಜ್ ಪುತ್ರ ಅನ್ನುವ ಅಹಂ ಇಲ್ವೇ ಇಲ್ಲ. ಎಲ್ಲಿ ಬೇಕಾದ್ರೂ ಕುಳಿತು ಬಿಡ್ತಾರೆ. ಸ್ನೇಹಿರು ಅಂದ್ರೆ ಪ್ರಾಣ ನೋಡಿ. ಆ ರೀತಿಯ ಶಿವರಾಜ್ಕುಮಾರ್ (Shiva Rajkumar) ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ (Geetha Shiva Rajkumar) ಕೂಡ ಹಾಗೆ ಇದ್ದಾರೆ. ತುಂಬಾನೆ ಸರಳ ವ್ಯಕ್ತಿತ್ವದ ವ್ಯಕ್ತಿನೇ ಆಗಿದ್ದಾರೆ. ಹಾಗಾಗಿಯೇ ಈ ಜೋಡಿ ಸೂಪರ್ (Super Pair) ಅನಿಸುತ್ತದೆ. ಸಿಂಪಲ್ ಅನಿಸುತ್ತದೆ. ಇವರ ಸರಳತೆಗೆ ಸಾಕ್ಷಿ ಅನ್ನುವ ಹಾಗೆ ಚೆನ್ನೈ ರೈಲ್ವೆ ಸ್ಟೇಷನ್ಗೆ ಹೋಗಿದ್ದಾರೆ. ಅಲ್ಲಿ ಆಗಮಿಸಿದ್ದ ಸ್ನೇಹಿತರನ್ನ ಅಷ್ಟೆ ಪ್ರೀತಿಯಿಂದಲೇ ಸ್ವಾಗತಿಸಿದ್ದಾರೆ. ಆ ಕ್ಷಣದ ಇನ್ನಷ್ಟು ವಿವರ ಇಲ್ಲಿದೆ ಓದಿ.
ಸಿಂಪಲ್ ಶಿವ ಮತ್ತು ಗೀತಾ
ಶಿವರಾಜ್ಕುಮಾರ್ ಅವರಿಗೆ ಚೆನ್ನೈಯಲ್ಲೂ ಸ್ನೇಹಿತರಿದ್ದಾರೆ. ಆ ಸ್ನೇಹವನ್ನ ಹಾಗೆ ಉಳಿಸಿಕೊಂಡಿದ್ದಾರೆ. ಶಿವಣ್ಣನ ಸ್ನೇಹಿತರು ಆಗಾಗ ಬೆಂಗಳೂರಿಗೆ ಬರೋದು ಇದೆ. ಅದೇ ರೀತಿಯೇ ಇವರೂ ಚೆನ್ನೈಗೆ ಹೋಗೋದು ಇದೆ. ಹಾಗೆ ಚೆನ್ನೈಗೆ ಹೋದಾಗಿನ ಒಂದು ವಿಡಿಯೋ ಸದ್ಯ ಎಲ್ಲೆಡೆ ಶೇರ್ ಆಗುತ್ತಿದೆ.
ಈ ಒಂದು ವಿಡಿಯೋದಲ್ಲಿ ಶಿವರಾಜ್ ಕುಮಾರ್ ಇದ್ದಾರೆ. ಗೀತಾ ಶಿವರಾಜ್ಕುಮಾರ್ ಇದ್ದಾರೆ. ಊರಿಂದ ಬಂದ ಸ್ನೇಹಿತರನ್ನ ಅಷ್ಟೆ ಪ್ರೀತಿಯಿಂದಲೇ ಸ್ವಾಗತಿಸಿದ್ದಾರೆ. ರೈಲ್ವೆ ಬರೋದನ್ನೆ ಕಾಯ್ತಾ ಇದ್ದರು. ಆಗಲೇ ಸ್ನೇಹಿತರು ಗೀತಾ ಮತ್ತು ಶಿವರಾಜ್ಕುಮಾರ್ ಇದ್ದ ಕಡೆಗೆ ಬಂದು ಖುಷಿಯನ್ನ ವ್ಯಕ್ತಪಡಿಸಿದರು.

