
ಇಂದಿನ ಯುಗದಲ್ಲಿ, “ಪ್ರೀತಿ ಪ್ರೇಮ ಎಲ್ಲಾ ಕುರುಡು” ಎಂಬ ಮಾತು ಸಾಮಾನ್ಯವಾಗಿ ನಿಜವಾಗಿದೆ, ಏಕೆಂದರೆ ಜನರು ಜಾತಿ, ಸ್ಥಾನಮಾನ ಅಥವಾ ವಯಸ್ಸನ್ನ ಹೊರತು ಪಡಿಸಿ ಪ್ರೀತಿಯಲ್ಲಿ ಬೀಳುತ್ತಾರೆ. ಇತ್ತೀಚೆಗೆ, ವಿವಾಹಿತ ಮಹಿಳೆಯರು ಕಿರಿಯ ಪುರುಷರೊಂದಿಗೆ ಸಂಬಂಧದಲ್ಲಿ ತೊಡಗಿಸಿಕೊಳ್ಳುವ ಗಮನಾರ್ಹ ಸಂಗತಿಗಳು ಕಂಡುಬಂದಿದೆ, ಅವಿವಾಹಿತ ಯುವಕರು ತಮಗಿಂತ ವಯಸ್ಸಾದ, ವಿವಾಹಿತ ಮಹಿಳೆಯರಿಗೆ ಏಕೆ ಆದ್ಯತೆ ನೀಡುತ್ತಾರೆ ಎಂಬ ಪ್ರಶ್ನೆಯು ಹೆಚ್ಚು ಗಮನ ಅರ್ಹ.

ಹಲವಾರು ಕಾರಣಗಳಿಗಾಗಿ ಒಂಟಿ ಯುವಕರು ತಮ್ಮ ವಯಸ್ಸಿನ ಹುಡುಗಿಯರಿಗಿಂತ ಮದುವೆ ಆದ ಮಹಿಳೆಯರನ್ನು ಹೆಚ್ಚು ಇಷ್ಟಪಡುತ್ತಾರೆ ಎಂದು ಸಮೀಕ್ಷೆಗಳು ಹೇಳುತ್ತದೆ .ವಿವಾಹಿತ ಮಹಿಳೆಯರು ಹೆಚ್ಚು ಬುದ್ಧಿವಂತ ಮತ್ತು ಅನುಭವಿಗಳಾಗಿರುತ್ತಾರೆ, ಇದು ಅವರನ್ನು ಒಂಟಿ ಪುರುಷರಿಗೆ ಆಕರ್ಷಕವಾಗಿಸುತ್ತದೆ.

ಅಷ್ಟೇ ಅಲ್ಲದೆ, ಇನ್ನೊಂದು ವಿಚಾರವೆಂದರೆ ಅದು ಹಣಕಾಸು ಮತ್ತು ಆರ್ಥಿಕ ಸದೃಢತೆ. ತಮಗಿಂತ ಹೆಚ್ಚಿನ ವಯಸ್ಸಿನ ಮಹಿಳೆಯರು ಆರ್ಥಿಕವಾಗಿ ಸದೃಢರಾಗಿರುತ್ತಾರೆ. ಈ ಆರ್ಥಿಕ ಸಬಲತೆ ಸಹ ಆಂಟಿಯರತ್ತ ಯುವಕರು ಆಕರ್ಷಣೆ ಆಗುವಂತೆ ಮಾಡುತ್ತದೆ. ಹುಡುಗರ ಕಷ್ಟದ ಸಮಯದಲ್ಲಿ ಅವರಿಗೆ ಹಿರಿಯ ವಯಸ್ಸಿನ ಮಹಿಳೆಯರು ಬೆಂಬಲವಾಗಿ ನಿಲ್ಲುತ್ತಾರೆ. ಹುಡುಗರಿಗೆ ಈ ಗುಣ ತುಂಬಾ ಇಷ್ಟವಾಗುತ್ತದೆ.

ಮತ್ತೊಂದು ದ ಸಂಗತಿಯೆಂದರೆ ಅದು ಜೀವನದ ಅನುಭವ. ಹಿರಿಯ ಮಹಿಳೆಯರು ಜೀವನದಲ್ಲಿ ಹೆಚ್ಚು ಅನುಭವವನ್ನು ಹೊಂದಿರುತ್ತಾರೆ. ಕಷ್ಟ, ನಷ್ಟ, ಸಂತೋಷಗಳನ್ನು ಎದುರಿಸಿರುತ್ತಾರೆ. ಹೀಗಾಗಿ ಯಾವುದೇ ರೀತಿಯ ಸಮಸ್ಯೆಗಳು ಎದುರಾದಾಗ ಅವರು . ಯುವಕರ ಜೊತೆಗಿರುತ್ತಾರೆ. ಇದು ಕೂಡಾ ಆಂಟಿಯರತ್ತ ಯುವಕರು ಆಕರ್ಷಿತರಾಗಲು ಕಾರಣವಾಗುತ್ತದೆ.
ಅಷ್ಟೇ ಅಲ್ಲ ಅವರ ಆತ್ಮವಿಶ್ವಾಸ ಮತ್ತು ಸ್ವಯಂ-ಭರವಸೆ ಹೆಚ್ಚು ಗಮನ ಸೆಳೆಯುತ್ತದೆ, ಹಾಗೆಯೇ ಅವರ ಉತ್ತಮ ಫ್ಯಾಷನ್ ಮತ್ತು ಶೈಲಿಯ ಪ್ರಜ್ಞೆ. ಹೆಚ್ಚುವರಿಯಾಗಿ, ವಿವಾಹಿತ ಮಹಿಳೆಯರು ತಮ್ಮ ಸಂವಹನದಲ್ಲಿ ಸಾಮಾನ್ಯವಾಗಿ ಹೆಚ್ಚು ನೇರವಾಗಿರುತ್ತದೆ, ಅನಗತ್ಯವಾದ ಸಣ್ಣ ಸಣ್ಣ ಮಾತುಕತೆಗಳನ್ನು ತಪ್ಪಿಸುತ್ತಾರೆ, ಇದು ಒಂಟಿ ಪುರುಷರಿಂದ ಮೆಚ್ಚುಗೆ ಪಡೆಯುತ್ತದೆ. ಅನೇಕ ವಿವಾಹಿತ ಮಹಿಳೆಯರು ಆರ್ಥಿಕವಾಗಿ ಸ್ವತಂತ್ರರಾಗಿದ್ದಾರೆ, ಒಂಟಿ ಯುವಕರಿಗೆ ಆಕರ್ಷಕ ಗುಣವಾಗಿದೆ.